ಬಣ್ಣದ ಬದುಕಿನ ಚಿತ್ತಾರ!

 

ಬಣ್ಣ ಹಚ್ಚಿ ಇಣುಕಿ ನೋಡಿ

ಕಣ್ಣು ತಿಕ್ಕಿ ತಿರುಚಿ ಮುಳುಗಿ

ಕೆರೆದು ತಲೆ ಎದ್ದು ಬರಲು

ರೋಗದ ಗುರುತು ಹಿಡಿದು

ಅದುವೇ ನನ್ನ  ಬಣ್ಣದ ಬದುಕು!

 

ವೈದ್ಯೆ ಎಂಬ ಬಿರುದು ಪಡೆದು

ಬಿಂಕವನು ಬಿಟ್ಟು ಮುಂದೆ ನಡೆದು

ರೋಗಗಳ ಜಾಡು ಹಿಡಿದು

ಜುಟ್ಟು ಗುಟ್ಟು ಹೊರಗೆ ತರಲು

ಯುದ್ಧ ಗೆದ್ದ ನನ್ನ ಬಾಳೆ ಸೊಬಗು!

 

ಕೈಗೆ ಲೇಖನಿಯೇ ಶೋಭೆಯಾಗಿ

ಕಣ್ಣು ಸೂಕ್ಷ್ಮ ದರ್ಶಕದಲ್ಲಿ ನೆಟ್ಟು

ಬಣ್ಣದ ಚಿತ್ತಾರದೊಳಗೆ ಹುಡುಕಿ

ರೋಗಿಗೊಂದು ದಾರಿ ಬೆಳಗಿ

ವೈದ್ಯರ ವೈದ್ಯೆಯಾದ ನನ್ನ ಬದುಕು!