ನೀಲಿ ಕೆರೆಯಲ್ಲಿದ್ದ ಗುಲಾಬಿ ಕಮಲ ಸೆಳೆಯಿತು ನನ್ನ ಕಣ್ಣ,
ಇವೆರಡಷ್ಟೇನಾ ಅನಿಸಿತು ಇದರ ಬಣ್ಣ,
ಆಗ ಇದ್ದೆ ನಾನು ಎಂಬಿಬಿಎಸ್ ನಲ್ಲಿ ಅಣ್ಣ.

ನೀರು ಭೋರ್ಗರೆಯಿತು ಆಗಿ ಒಂದು ಜಲಧಾರೆ,
ಆ ಸುಂದರ ದೃಶ್ಯ ನಾನೆಂದೂ ಮರೆಯಲಾರೆ,
ಪಿ ಜಿ ಆಗಿದ್ದೆ ನಾನಾಗ, ಆಶಿಸಿದೆ ಆಗಲು ಇದರಲ್ಲೊಂದು ಮಿನುಗು ತಾರೆ.

ಜಲಧಾರೆ ನದಿಯಾಗಿ ಹರಿದು ಸೇರಿತು ಮಹಾಸಾಗರ,
ಈಗಿತ್ತು ಇದರಲ್ಲಿ ವಿಭಿನ್ನ ಬಣ್ಣದ ಜೀವಿಗಳ ಸಂಸಾರ,
ಕನ್ಸಲ್ಟನ್ಟ್ ಆಗಿ ಮಾಡುತ್ತಿದ್ದೇನೆ ನಾನೀಗ ಈ ವಿಷಯದ ವಿಚಾರ.

ಕೆರೆಯಿಂದ ಮಹಾಸಾಗರದ ಆಳ ಬೆಳೆದಂತೆ,
ಗುಲಾಬಿ ನೀಲಿಯಿಂದ ಬೇರೆ ಬೇರೆ ಬಣ್ಣಗಳಾದಂತೆ,
ಬೆಳೆದಿದೆ ರೋಗಗಳನ್ನು ಕಂಡು ಹಿಡಿಯುವ ಬ್ರಹ್ಮಾಸ್ತ್ರ,ಇದುವೇ ನಮ್ಮ ರೋಗ ಲಕ್ಷಣ ಶಾಸ್ತ್ರ